ಅಪ್ಪು ಮಾವನ ಹಾದಿಯಲ್ಲಿ ನಡೆಯುತ್ತೇವೆ: ಧೀರನ್ ರಾಮ್ ಕುಮಾರ್ - _Dheeren ramkumar news
🎬 Watch Now: Feature Video
ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್ ಅಂತಾನೇ ಅಭಿಮಾನಿಗಳ ಹೃದಯ ಗೆದ್ದವರು ಪುನೀತ್ ರಾಜ್ ಕುಮಾರ್. ಯುವರತ್ನನ ಅಕಾಲಿಕ ಮರಣದಿಂದ ಕನ್ನಡ ಸಿನಿಮಾ ರಂಗ, ರಾಜ್ ಕುಮಾರ್ ಕುಟುಂಬ ಹಾಗು ಕೋಟ್ಯಂತರ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಆದರೂ ಅಪ್ಪು ಇಲ್ಲ ಎಂಬ ಸತ್ಯವನ್ನ ಒಪ್ಪಿಕೊಳ್ಳಲೇಬೇಕಿದೆ. ಈ ಸಮಯದಲ್ಲಿ ಮಾತನಾಡಿದ ರಾಜ್ ಕುಮಾರ್ ಮೊಮ್ಮಗ ಧೀರನ್ ರಾಮ್ ಕುಮಾರ್, ಅಪ್ಪು ಮಾವ ಇಲ್ಲ ಅನ್ನೋದನ್ನ ನಮ್ಮ ಕೈಯಲ್ಲಿ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಬೇಸರ ತೋಡಿಕೊಂಡರು.