ನಾಳೆಯೇ ಜಂಬೂ ಸವಾರಿ.. ಗತವೈಭವ ಕಣ್ಮುಂದೆ ತರುವ ಮೆರವಣಿಗೆಗೆ ಸಜ್ಜುಗೊಳ್ಳುತ್ತಿದೆ ವೇದಿಕೆ! - ಪುಷ್ಪಾರ್ಚನೆ
🎬 Watch Now: Feature Video
ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಗೆ ಕೆಲವೇ ಗಂಟೆಗಳು ಬಾಕಿ ಇದ್ದು, ಅರಮನೆ ಮುಂಭಾಗದ ವೇದಿಕೆ ಸಿದ್ದಗೊಳಿಸಲಾಗುತ್ತಿದೆ. ಅರಮನೆ ಮುಂಭಾಗ ಜಂಬೂಸವಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ವೇದಿಕೆ, ಗಣ್ಯರು, ಹಾಗೂ ಜನಸಾಮಾನ್ಯರ ವೇದಿಕೆ ಸಿದ್ದಪಡಿಸಲಾಗುತ್ತಿದೆ. ಅಷ್ಟೇ ಅಲ್ಲ ಅರಮನೆಯ ಕೋಟೆ ಆಂಜನೇಯ ಸ್ವಾಮೀ ದೇವಸ್ಥಾನದ ಮುಂಭಾಗದಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ರಸ್ತೆಯ ಬದಿಯ ಎರಡು ಇಕ್ಕೆಲಗಳಲ್ಲಿ ಬೊಂಬುಗಳ ಹಾಗೂ ಜಾಲರಿ ಹಾಕಿ ಸಾರ್ವಜನಿಕರು ನುಳುಸದಂತೆ ಬೀಗಿಭದ್ರತೆ ಒದಗಿಸಲಾಗಿದೆ.
Last Updated : Oct 7, 2019, 5:47 PM IST