ಮೂಲ'ವ್ಯಾದಿ'ಗೂ ಟಗರಿನ ಮದ್ದು.. ರಾಜ್ಯ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಸಾಹೋ..! - Siddaramaiah
🎬 Watch Now: Feature Video
ರಾಜ್ಯ ಕಾಂಗ್ರೆಸ್ನಲ್ಲಿ ವಲಸೆ ಕಾಂಗ್ರೆಸ್ಸಿಗರ ಮೇಲುಗೈ ಆಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರೇ ವಿಧಾನಸಭೆ ಪ್ರತಿಪಕ್ಷದ ನಾಯಕರಾಗುವ ಮೂಲಕ ಪ್ರಾಬಲ್ಯ ಮೆರೆದಿದ್ದಾರೆ. ಸಾಕಷ್ಟು ಸ್ಪರ್ಧೆ ಹಾಗೂ ಒತ್ತಡದ ನಡುವೆಯೂ ಮಹತ್ವದ ಹುದ್ದೆ ಗಿಟ್ಟಿಸಿಕೊಳ್ಳುವ ಮೂಲಕ ರಾಜ್ಯ ಕಾಂಗ್ರೆಸ್ನಲ್ಲಿ ತಾವು ಈಗಲೂ ಅನಿವಾರ್ಯ ಎನ್ನುವುದನ್ನು ಸಿದ್ದರಾಮಯ್ಯ ತೋರಿಸಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ನಲ್ಲಿ ಅವರದ್ದೇ ದರ್ಬಾರು ನಡೆಯುವುದು ಸಂಶಯವಿಲ್ಲ.