ಮುಂಗಾರು ಆರಂಭವಾದರೂ ಬಿತ್ತನೆ ಮಾಡಲು ಕೋಟೆನಾಡಿನ ರೈತರ ಹಿಂದೇಟು - ಬಿತ್ತನೆ ಕಾರ್ಯದಲ್ಲಿ ತೊಡಗಿರುವ ರೈತರು ಸುದ್ದಿ
🎬 Watch Now: Feature Video

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರತಿ ವರ್ಷವೂ ಬರದ ಛಾಯೆ ಆವರಿಸಿರುತ್ತಿತ್ತು. ಆದರೆ, ಮಳೆರಾಯ ಈ ವರ್ಷ ರೈತರಿಗೆ ಆಸರೆಯಾಗಿದ್ದಾನೆ. ಜಿಲ್ಲೆಯಲ್ಲಿ ಮುಂಗಾರು ಆರಂಭವಾದರೂ ಈ ಭಾರಿ ನಿರೀಕ್ಷೆ ಮಟ್ಟದಲ್ಲಿ ಬಿತ್ತನೆ ಕಾರ್ಯ ಆಗಿಲ್ಲ. ಜಿಲ್ಲೆಯಲ್ಲಿ ಬಿತ್ತನೆ ಪ್ರಕ್ರಿಯೆ ಕಳೆದ ಬಾರಿಗಿಂತ ಈ ಭಾರಿ ಇಳಿಕೆ ಕಂಡಿದ್ದು, ಮುಂಗಾರು ಆಗಮಿಸಿದರೂ ರೈತರು ಬಿತ್ತನೆಗೆ ಮುಂದಾಗಿಲ್ಲ.