ಹಾವೇರಿಯ ಶಿವನಂದಿ ಕೊಬ್ಬರಿ ಹೋರಿ ಸಾವು... ಅಂತ್ಯಕ್ರಿಯೆ ನಡೆಸಿ ಪ್ರಾಣಿಪ್ರೇಮ ಮೆರೆದ ಮಾಲೀಕರು - -the-owner-did-funeral-to-sivanandi
🎬 Watch Now: Feature Video
ಹಾವೇರಿ: ರಾಜ್ಯದ ವಿವಿಧಡೆ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಹೆಸರು ಪಡೆದಿದ್ದ ದೇವಿಹೊಸೂರಿನ ಶಿವನಂದಿ ಕೊಬ್ಬರಿ ಹೋರಿ ಮಂಗಳವಾರ ಮುಂಜಾನೆ ಅಸುನೀಗಿದೆ. ಶಿವನಂದಿ ಸಾವು ಅಭಿಮಾನಿಗಳಲ್ಲಿ ತೀವ್ರ ದುಃಖ ತಂದಿದೆ. ಮನೆಯ ಸದಸ್ಯನ ಕಳೆದುಕೊಂಡ ದುಃಖದಲ್ಲಿದ್ದ ಶಿವನಂದಿ ಮಾಲೀಕರು ಅದರ ಅಂತ್ಯಕ್ರಿಯೆ ನಡೆಸುವ ಮೂಲಕ ಪ್ರಾಣಿ ಪ್ರೇಮ ಮೆರೆದಿದ್ದಾರೆ. ತೆರೆದ ವಾಹನದಲ್ಲಿ ಡೊಳ್ಳು ಭಾಜಾ ಭಜಂತ್ರಿ, ಹಲಗೆ ಜೊತೆ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಶಿವನಂದಿಯ ಅಂತ್ಯಕ್ರಿಯೆ ಮಾಡುವ ಮೂಲಕ ವಿದಾಯ ಹೇಳಲಾಯಿತು.