ತುಮಕೂರಲ್ಲಿ ಶಾಲಾ ದಾಖಲಾತಿ ಪ್ರಕ್ರಿಯೆ ಹೇಗಿದೆ..? ಡಿಡಿಪಿಐ ಸಿ ನಂಜಯ್ಯ ನೀಡಿದ್ರು ಈ ಮಾಹಿತಿ - School admission
🎬 Watch Now: Feature Video
ನಾಳೆಯಿಂದ ಆನ್ಲೈನ್ ತರಗತಿಗೆ ಅವಕಾಶ ನೀಡಲಾಗಿದ್ದು, ಜಿಲ್ಲೆಯಲ್ಲಿ ದಾಖಲಾತಿ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ನಂಜಯ್ಯ ಮಾಹಿತಿ ನೀಡಿದ್ದಾರೆ. 1ನೇ ತರಗತಿಯಿಂದ 10ನೇ ತರಗತಿ ವರೆಗೆ ಜಿಲ್ಲೆಯಲ್ಲಿ 2,30,000 ಮಕ್ಕಳು ದಾಖಲಾಗಬೇಕಿದ್ದು, ದಾಖಲಾತಿ ಪ್ರಕ್ರಿಯೆ ಭರದಿಂದ ಸಾಗಿದೆ. ಸರ್ಕಾರದ ಸುತ್ತೋಲೆಯಂತೆ ಜೂನ್ 21ರಿಂದ 30ರ ವರೆಗೆ ದಾಖಲಾತಿ ನಡೆಯಲಿದೆ. ಅಂಗನವಾಡಿ ಕಾರ್ಯಕರ್ತೆಯರ ಮೂಲಕವೂ ದಾಖಲಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದಿದ್ದಾರೆ.