ದಾವಣಗೆರೆ: ಭಣಗುಡುತ್ತಿದೆ ಹೆದ್ದಾರಿ, ಹೊರ ರಾಜ್ಯದಿಂದ ಬರುವವರ ತಪಾಸಣೆ - ರಾಜ್ಯ ಸರ್ಕಾರ ಮೆಡಿಕಲ್ ಗೂಡ್ಸ್
🎬 Watch Now: Feature Video
ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕರ್ಫ್ಯೂ ವಿಧಿಸಿದೆ. ಕೊರೊನಾ ಸಂಕಷ್ಟ ಸಮಯದಲ್ಲಿ ರಾಜ್ಯ ಸರ್ಕಾರ ಮೆಡಿಕಲ್ ಗೂಡ್ಸ್ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ದಾವಣಗೆರೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 4 ಖಾಲಿ ಖಾಲಿಯಾಗಿದೆ. ಗೂಡ್ಸ್ ಗಾಡಿಗಳ ಸಂಚಾರ ಕೂಡ ವಿರಳವಾಗಿದ್ದು, ಬಾಕಿ ದಿನಗಳಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿದ್ದವು. ಇನ್ನು ದಾವಣಗೆರೆಗೆ ಎಂಟ್ರಿಯಾಗುವ ಪ್ರಮುಖ ರಸ್ತೆಗಳಲ್ಲಿ ಚೆಕ್ ಪೋಸ್ಟ್ಗಳನ್ನು ನಿರ್ಮಾಣ ಮಾಡಿದ್ದು, ಹೊರ ರಾಜ್ಯ ಹಾಗೂ ಜಿಲ್ಲೆಯಿಂದ ಬರುವ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಅನವಶ್ಯಕವಾಗಿ ಓಡಾಡಿದವರಿಗೆ ದಂಡ ವಿಧಿಸುತ್ತಿದ್ದು, ವಾಹನಗಳನ್ನು ವಶಕ್ಕೆ ಪಡೆದುಕೊಳ್ಳುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ.