ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ದಿನಾಂಕ ನಿಗದಿ
🎬 Watch Now: Feature Video
ಮಂಗಳೂರು: ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಚುನಾವಣೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಚುನಾವಣೆ ನಡೆದು ಮೂರು ತಿಂಗಳಾದರೂ ನೂತನ ಮೇಯರ್-ಉಪಮೇಯರ್ ಆಯ್ಕೆ ಆಗಿರಲಿಲ್ಲ. ಇದೀಗ ಫೆಬ್ರವರಿ 28ಕ್ಕೆ ಮೇಯರ್-ಉಪಮೇಯರ್ ಚುನಾವಣೆ ನಡೆಸಲು ದಿನಾಂಕ ನಿಗದಿಯಾಗಿದೆ. ಮೀಸಲಾತಿ ಗೊಂದಲದಿಂದ ಕಳೆದ ಮೂರು ತಿಂಗಳಿನಿಂದ ಮೇಯರ್-ಉಪಮೇಯರ್ ಚುನಾವಣೆ ನಡೆದಿರಲಿಲ್ಲ. ಪಾಲಿಕೆ ಚುನಾವಣೆ 2019ರ ನವೆಂಬರ್ 12ರಂದು ನಡೆದಿತ್ತು. ಬಿಜೆಪಿ 44 ಕಾಂಗ್ರೆಸ್ 14 ಎಸ್ ಡಿಪಿಐ ಎರಡು ಸ್ಥಾನವನ್ನು ಪಡೆದಿತ್ತು. ಈ ಬಾರಿ ಮೇಯರ್-ಉಪಮೇಯರ್ ಸ್ಥಾನಕ್ಕೆ ಯಾರು ಆಯ್ಕೆಯಾಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.