ಇಲ್ಲಿದೆ ಕನ್ನಡಮ್ಮನ ದೇವಾಲಯ... ತಾಯಿ ಭುವನೇಶ್ವರಿಗೆ ನಿತ್ಯವೂ ಪೂಜೆ! - Mysore Bhuvaneshwari devi temple
🎬 Watch Now: Feature Video
ಮೈಸೂರು: ಇಲ್ಲಿ ಕನ್ನಡಮ್ಮನಿಗೆ ದೇವಾಲಯ ಕಟ್ಟಲಾಗಿದೆ. ಮೈಸೂರನ್ನು ಆಳಿದ ರಾಜರು ತಮ್ಮ ಆಡಳಿತದ ಅವಧಿಯಲ್ಲಿ ಕನ್ನಡಕ್ಕೆ ವಿಶೇಷ ಸ್ಥಾನಮಾನ ಕೊಟ್ಟಿದ್ದರು. ಕನ್ನಡವನ್ನು ನಿತ್ಯ ನೆನಪಿಸುವ, ಪೂಜಿಸುವ ಸಲುವಾಗಿ ಅರಮನೆಯ ಒಳಗಡೆ ಭುವನೇಶ್ವರಿ ತಾಯಿಯ ದೇವಾಲಯವನ್ನು ಕಟ್ಟಿಸಲಾಗಿದೆ. ಇದು ಹೊಯ್ಸಳ ಶೈಲಿಯಲ್ಲಿ ನಿರ್ಮಾಣವಾಗಿದೆ. ಇಲ್ಲಿ ನಿತ್ಯವೂ ಭುವನೇಶ್ವರಿ ದೇವಿಗೆ ಪೂಜೆ ನಡೆಯುತ್ತದೆ. ಪ್ರತಿ ದಿನವೂ ಭುವನೇಶ್ವರಿ ತಾಯಿಗೆ ಅಭಿಷೇಕ, ಅಲಂಕಾರ ಹಾಗೂ ಪೂಜೆಗಳು ನಡೆಯುತ್ತವೆ. ರಾಜ್ಯದಲ್ಲಿ ಭುವನೇಶ್ವರಿ ತಾಯಿಗೆ ದೇವಾಲಯವನ್ನು ಕಟ್ಟಿ ಪ್ರತಿ ದಿನವೂ ಪೂಜೆ ನಡೆಸುವ ದೇವಾಲಯ ಎಂಬ ಖ್ಯಾತಿಗೆ ಈ ದೇವಾಲಯ ಪಾತ್ರವಾಗಿದೆ ಎಂದು ಹೇಳುತ್ತಾರೆ ಇಲ್ಲಿನ ಅರ್ಚಕ ಸೂರ್ಯನಾರಾಯಣ.