ಕ್ಷಯರೋಗ ದಿನಾಚರಣೆ : ಸೈಕಲ್ ಜಾಥಾಗೆ ಜಿಲ್ಲಾಧಿಕಾರಿ ಚಾಲನೆ - ಕ್ಷಯರೋಗ ದಿನಾಚರಣೆ
🎬 Watch Now: Feature Video
ಗಂಗಾವತಿ (ಕೊಪ್ಪಳ): ವಿಶ್ವ ಕ್ಷಯ ರೋಗ ದಿನಾಚರಣೆ ಅಂಗವಾಗಿ ನಗರದಲ್ಲಿ ನಾನಾ ಸಂಘಟನೆಗಳು ಹಮ್ಮಿಕೊಂಡಿದ್ದ ಜನ ಜಾಗೃತಿ ಕಾರ್ಯಕ್ರಮ ಹಾಗೂ ಸೈಕಲ್ ಜಾಥಾಗೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಚಾಲನೆ ನೀಡಿದರು. ಎಪಿಎಂಸಿ ಆವರಣದಲ್ಲಿ ಸೈಕಲ್ ಜಾಥಾಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ, ಸ್ವತಃ ತಾವೂ ಸೈಕಲ್ ಸವಾರಿ ಮಾಡುವ ಮೂಲಕ ಜನರ ಗಮನ ಸೆಳೆದರು. ಹಾಸ್ಯ ಭಾಷಣಕಾರ ಬಿ. ಪ್ರಾಣೇಶ್, ರಾಜ ವಂಶಸ್ಥೆ ಲಲಿತಾರಾಣಿ, ಹಿರಿಯ ವೈದ್ಯ ಸೋಮರಾಜು, ಜಿಲ್ಲಾ ಕ್ಷಯರೋಗ ಅಧಿಕಾರಿ ಮಹೇಶ್, ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ, ಉದ್ಯಮಿ ಸೂಗಪ್ಪ, ಡಾ. ಈಶ್ವರ ಸವುಡಿ ಸೇರಿ ನಗರದ ನಾನಾ ಸಂಘಟನೆಗಳು ಭಾಗಿಯಾಗಿದ್ದವು.