ನೂತನ ಡಿಜಿ ಪ್ರವೀಣ್ ಸೂದ್ ಮುಂದಿರುವ ಸವಾಲುಗಳೇನು?
🎬 Watch Now: Feature Video
ಬೆಂಗಳೂರು: ಇಂದು ನೂತನವಾಗಿ ನೇಮಕಗೊಂಡ ಪ್ರವೀಣ್ ಸೂದ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಬಳಿಕ ಈಟಿವಿ ಭಾತನೊಂದಿಗೆ ಮಾತನಾಡಿದ ಅವರು, ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಪೊಲೀಸರ ಜೊತೆ ಸಾರ್ವಜನಿಕರು ಸಹ ಸ್ಪಂದಿಸಬೇಕು. ಇನ್ನು ಸೈಬರ್ ಅಪರಾಧಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನನ್ನ ಅಧಿಕಾರಾವಧಿಯಲ್ಲಿ ರಾಘವೇಂದ್ರ ಔರಾದ್ಕರ್ ಸಮಿತಿಯ ವೇತನ ಪರಿಶೀಲನಾ ಶಿಪಾರಸನ್ನು ಸಂಪೂರ್ಣವಾಗಿ ಜಾರಿ ತರಲು ಪ್ರಯತ್ನಿಸುತ್ತೇನೆ ಎಂದು ನೂತನ ಡಿಜಿ ಭರವಸೆ ನೀಡಿದ್ದಾರೆ.