ಮೋದಿಗೆ ಬೈದಷ್ಟು ಇಂದಿರಾ ಗಾಂಧಿಗೆ ಬೈಯ್ದಿದ್ರೇ ಬೈಯ್ದವರ ಸಂತಾನವೇ ಇರ್ತಿರಲಿಲ್ಲ : ಸಿ ಟಿ ರವಿ - ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ
🎬 Watch Now: Feature Video
ವಿಪಕ್ಷಗಳಿಂದ ಅತಿ ಹೆಚ್ಚು ಬೈಯಿಸಿಕೊಂಡ ಪ್ರಧಾನಮಂತ್ರಿ ಯಾರಾದರೂ ಇದ್ರೇ ಅದು ನಮ್ಮ ನರೇಂದ್ರ ಮೋದಿಯವರು, ಇಷ್ಟೂಂದು ಏನಾದ್ರೂ ಇಂದಿರಾಗಾಂಧಿಗೆ ಬೈಯ್ದಿದ್ದರೆ, ಅವರ ಸಂತಾನವೇ ಇರುತ್ತಿರಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ. ಶಿವಮೊಗ್ಗ ಪ್ರೇರಣಾ ಸಭಾಂಗಣದಲ್ಲಿ ಜಿಲ್ಲಾ ಜನ ಸೇವಕ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಒಂದು ಪಕ್ಷ ಇತ್ತು, ಐದು ತಲೆ ಮಾರು, ನಾಲ್ಕು ದಶಕ ಒಂದೇ ಘೋಷಣೆ, ಗರಿಬಿ ಹಠಾವೋ, ಮುತ್ತಾತನೂ ಗರೀಬಿ ಹಠಾವೋ, ಅಜ್ಜನೂ ಗರೀಬಿ ಹಠವೋ, ಅಪ್ಪನೂ ಗರೀಬಿ ಹಠಾವೋ, ಮಕ್ಕಳು, ಮೊಮ್ಮಕ್ಕಳು ಸಹ ಗರೀಬಿ ಹಠಾವೋ ಎನ್ನುತ್ತಿದ್ದರು ಎಂದು ವ್ಯಂಗ್ಯವಾಡಿದ್ದಾರೆ.