ತೈಲ ಬೆಲೆ ಏರಿಕೆ: ಸವಾರರಿಗೆ ಸಿಹಿ ನೀಡಿ ದಂಪತಿ ವಿನೂತನ ಪ್ರತಿಭಟನೆ - Couple different protest against petrol-diesel rate hike
🎬 Watch Now: Feature Video
ಮೈಸೂರು: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಹಾಗೂ ಕೇಂದ್ರ ಬಜೆಟ್ ಜನಪರವಾಗಿಲ್ಲವೆಂದು ಸವಾರರಿಗೆ ಸಿಹಿ ನೀಡುವ ಮೂಲಕ ದಂಪತಿ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಚಾಮುಂಡಿ ಪುರಂನ ಪೆಟ್ರೋಲ್ ಬಂಕ್ ಬಳಿ ನಗರ ಪಾಲಿಕೆ ಸದಸ್ಯೆ ಶೋಭಾ ಹಾಗೂ ಅವರ ಪತಿ ಸುನೀಲ್ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದ ಸವಾರಿಗೆ ಸಿಹಿ, ಗುಲಾಬಿ ವಿತರಣೆ ಮಾಡಿ ಕೇಂದ್ರ ಸರ್ಕಾರದ ಅಸಮಾಧಾನ ಹೊರಹಾಕಿದರು. ಮೋದಿ ಬಂದ ನಂತರ ಪೆಟ್ರೋಲ್ ಬೆಲೆ 50 ರೂ. ಆಗುತ್ತೆ ಅಂತ ಅಂದುಕೊಂಡಿದ್ದೆವು. ಆದರೆ, ಮೋದಿಯವರು 100 ರೂ. ಹತ್ತಿರ ತಂದು ಗ್ರಾಹಕರಿಂದ ಹಗಲು ದರೋಡೆ ಮಾಡುತ್ತಿದ್ದಾರೆ. ಇದು ಯಾವ ನ್ಯಾಯ? ಎಂದು ಕಿಡಿಕಾರಿದರು.