ಬಂದ್ ಕರೆ ನಡುವೆಯೂ ಶೃಂಗೇರಿಯಲ್ಲಿ ನುಡಿಜಾತ್ರೆಗೆ ಕ್ಷಣಗಣನೆ - ಶೃಂಗೇರಿ ಪಟ್ಟಣದ ಬಂದ್ ಗೆ ಕರೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5658174-thumbnail-3x2-sanju.jpg)
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಯುತ್ತಿರುವ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಇತ್ತ ಸಮ್ಮೇಳನದ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿ ಸಾಹಿತ್ಯ ಪರಿಷತ್ ಉಳಿಸಿ ಹಾಗೂ ನಕ್ಸಲ್ ವಿರೋಧಿ ಸಂಘಟನೆಯಿಂದ ಇಂದು ಶೃಂಗೇರಿ ಪಟ್ಟಣದ ಬಂದ್ಗೆ ಕರೆ ಕೊಟ್ಟಿದ್ದು, ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಗರದ ಪ್ರಮುಖ ಬೀದಿಗಳಲ್ಲಿ ಕೆಲ ಅಂಗಡಿ-ಮುಂಗಟ್ಟುಗಳು ನಿಧಾನವಾಗಿ ಬಾಗಿಲು ತೆರೆಯುತ್ತಿದ್ದರೆ, ಇನ್ನು ಕೆಲ ಅಂಗಡಿಗಳು ಸಂಪೂರ್ಣವಾಗಿ ಬಂದ್ ಆಗಿವೆ.