ಬೆಂಗಳೂರಲ್ಲಿ 225 ಕೊರೊನಾ ಶಂಕಿತರು ಪತ್ತೆ!... ವೈದ್ಯರು ಏನಂತಾರೆ? - ಬೆಂಗಳೂರಲ್ಲಿ ಕೊರೊನಾ ಭೀತಿ
🎬 Watch Now: Feature Video
ಬೆಂಗಳೂರು: ಮಾರಣಾಂತಿಕ ಕೊರೊನಾ ವೈರಸ್ ಪತ್ತೆಯಾಗಿ ಒಂದು ತಿಂಗಳು ಕಳೆದರೂ ಸಿಲಿಕಾನ್ ಸಿಟಿಯ ಜನರಲ್ಲಿ ಮಾತ್ರ ಭೀತಿ ಕಡಿಮೆಯಾಗಿಲ್ಲ. ತಿಂಗಳು ಕಳೆದರೂ ಕೊರೊನಾ ಬಗ್ಗೆ ಮಾಹಿತಿ ಪಡೆಯಲು ಆಸ್ಪತ್ರೆಗೆ ಇನ್ನೂ ಜನರು ಬರುತ್ತಿದ್ದಾರೆ. ಇದುವರೆಗೆ ನಗರದಲ್ಲಿ ಒಟ್ಟು 225 ಕೊರೊನಾ ಶಂಕಿತರು ಪತ್ತೆಯಾಗಿದ್ದು, 136 ಶಂಕಿತ ರೋಗಿಗಳ ವರದಿಗಳು ನೆಗೆಟಿವ್ ಬಂದಿದೆ. ನಗರದಲ್ಲಿ ಇದುವರೆಗೆ ಒಟ್ಟು 28,148 ವಿದೇಶಿಗರಿಗೆ ಸ್ಕ್ರೀನಿಂಗ್ ಟೆಸ್ಟ್ ಮಾಡಲಾಗಿದೆ. ಚೀನಾದಲ್ಲಿ ಕೊರೊನಾ ಹತೋಟಿಗೆ ಬಾರದ ಹಿನ್ನೆಲೆ, ನಗರದಲ್ಲೂ ಸ್ಕ್ರೀನಿಂಗ್ ಪರೀಕ್ಷೆ ಸೇರಿದಂತೆ ಕೊರೊನಾ ಶಂಕಿತರ ಮೇಲೆ ನಿಗಾ ಮುಂದುವರೆಸುವಂತೆ ಆರೋಗ್ಯ ಇಲಾಖೆ ಆದೇಶ ನೀಡಿದೆ ಎಂದು ರಾಜೀವ್ ಗಾಂಧಿ ಆಸ್ಪತ್ರೆ ನಿರ್ದೇಶಕ ಡಾ. ನಾಗರಾಜ್ ತಿಳಿಸಿದ್ದಾರೆ.