ಚಿತ್ರೀಕರಣ ಆರಂಭಗೊಂಡರೂ ಅತಂತ್ರದಲ್ಲೇ ಕಲಾವಿದರ ಬದುಕು: ಮಾಲೂರು ಶ್ರೀನಿವಾಸ್ - corona lockdown
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9795849-thumbnail-3x2-sana.jpg)
ಬೆಂಗಳೂರು: ಜೀವನದಲ್ಲಿ ಅದೆಷ್ಟೋ ಕಷ್ಟಗಳಿದ್ದರೂ ರಂಗಭೂಮಿಯಲ್ಲಿ ಅದೆಲ್ಲಾ ನೋವು ಬದಿಗಿಟ್ಟು ಎಲ್ಲರನ್ನೂ ರಂಜಿಸುವ ಮೂಲಕ ಕಲೆಯನ್ನು ಪ್ರದರ್ಶಿಸುತ್ತಿದ್ದ ಕಲಾವಿದರು ಲಾಕ್ಡೌನ್ ಸಮಯದಲ್ಲಿ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಎದುರಿಸಿದ್ದಾರೆ. ಅನ್ಲಾಕ್ ನಂತರ ಚಿತ್ರರಂಗ, ಸಂಗೀತ ಕ್ಷೇತ್ರ, ನಾಟಕ ಕ್ಷೇತ್ರದಲ್ಲೂ ಕೆಲಸಗಳು ನಿಧಾನವಾಗಿ ಆರಂಭಗೊಂಡಿವೆ. ಆದರೂ ಕಲಾವಿದರ ಬದುಕು ಇನ್ನೂ ಅತಂತ್ರವಾಗಿಯೇ ಇದೆ. ಈ ಕುರಿತು ನೃತ್ಯ ನಿರ್ದೇಶಕ, ನವರಸ ನಟನಾ ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ಮಾಲೂರು ಶ್ರೀನಿವಾಸ್ ಅವರು ಈಟಿವಿ ಭಾರತದ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.