ಹಾವೇರಿಯಲ್ಲಿ ವ್ಯಾಪಾರ ಫುಲ್ ಡಲ್ - ಹಾವೇರಿ
🎬 Watch Now: Feature Video
ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಮಾಸದ ಕೊನೆಯ ದಿನಗಳು ಬಂದರೆ ಸಾಕು ಹಾವೇರಿ ಮಹಾತ್ಮಾ ಗಾಂಧೀಜಿ ರಸ್ತೆ ಇಕ್ಕೆಲಗಳಲ್ಲಿ ಒಣಹಣ್ಣುಗಳ ಅಂಗಡಿಗಳು, ಸುಗಂಧ ದ್ರವ್ಯ, ಮೆಹಂದಿ ಅಂಗಡಿಗಳು ತಲೆ ಎತ್ತುತ್ತಿದ್ದವು. ಆದರೆ, ಈ ವರ್ಷ ರಂಜಾನ್ ಆಚರಣೆ ಮೇಲೆ ಕೊರೊನಾ ಕರಿಛಾಯೆ ಬಿದ್ದಿದೆ. ಪರಿಣಾಮ ಹಾವೇರಿಯ ಎಂ.ಜಿ.ರಸ್ತೆಯಲ್ಲಿ ಬೆರಳೆಣಿಕೆಯಷ್ಟು ಅಂಗಡಿಗಳು ತಲೆ ಎತ್ತಿವೆ. ಆ ಅಂಗಡಿಗಳಲ್ಲಿ ಸಹ ವ್ಯಾಪಾರ ಬರದಿಂದ ಸಾಗುತ್ತಿಲ್ಲ ಎನ್ನುತ್ತಿದ್ದಾರೆ ಈ ವ್ಯಾಪಾರಿಗಳು.