ಕೊರೊನಾ ಎಫೆಕ್ಟ್: ಮಂಡ್ಯದಲ್ಲಿ ಮಾಂಸದಂಗಡಿಗಳಿಗೆ ಬೀಗ ಹಾಕಿದ ವರ್ತಕರು - ಮಂಡ್ಯದಲ್ಲಿ ಕೊರೊನಾ ಎಫೆಕ್ಟ್
🎬 Watch Now: Feature Video
ಮಂಡ್ಯ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕೆ.ಆರ್. ಪೇಟೆ ಪಟ್ಟಣದಲ್ಲಿ ವ್ಯಾಪಾರಿಗಳು ಸ್ವಯಃ ಪ್ರೇರಣೆಯಿಂದ ಮಾಂಸದಂಗಡಿಗಳನ್ನು ಬಂದ್ ಮಾಡಿ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಸ್ವಚ್ಛತೆಗೆ ಮುಂದಾಗಿದ್ದು, ಅಂಗಡಿ ಮಾಲೀಕರು ಮಾಂಸದಂಗಡಿಗಳನ್ನು ಬಂದ್ ಮಾಡಿ ವ್ಯಾಪಾರ ಸ್ಥಗಿತಗೊಳಿಸಿದ್ದಾರೆ. ಅಲ್ಲದೆ ಸುತ್ತಮುತ್ತಲ ಪರಿಸರದ ಸ್ವಚ್ಛತೆಗೆ ಮುಂದಾಗಿದ್ದಾರೆ. ಅಂಗಡಿಗಳ ಬಂದ್ ಹಿನ್ನೆಲೆ ಮಾಂಸಪ್ರಿಯರಿಗೆ ನಿರಾಶೆಯಾಗಿದ್ದರೂ ಮಾಲೀಕರ ಹಾಗೂ ಅಧಿಕಾರಿಗಳ ನಿರ್ಧಾರಕ್ಕೆ ಬೆಂಬಲ ವ್ಯಕ್ತವಾಗಿದೆ.