1 ರಿಂದ 1579ಕ್ಕೆ ಏರಿದ ಹಾವೇರಿ ಕೋವಿಡ್ ಸಂಖ್ಯೆ: ಜಿಲ್ಲಾಡಳಿತಕ್ಕೆ ಮಳೆಗಾಲದ ರೋಗಗಳ ಸವಾಲ್
🎬 Watch Now: Feature Video
ಹಾವೇರಿ ಜಿಲ್ಲೆಯಲ್ಲಿ ಮೇ 4 ರಂದು ಒಂದು ಪ್ರಕರಣದಿಂದ ಆರಂಭವಾದ ಕೊರೊನಾ ಪೀಡಿತರ ಸಂಖ್ಯೆ ಇದೀಗ 1,579 ಕ್ಕೆ ಬಂದು ತಲುಪಿದೆ. ದಿನದಿಂದ ದಿನಕ್ಕೆ ವೈರಾಣು ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು ಸೋಂಕಿತರಿಗೆ ಚಿಕಿತ್ಸೆ ನೀಡುವುದು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ. ಅದರಲ್ಲೂ ಕೊರೊನಾ ವಾರಿಯರ್ಸ್‌ಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಆತಂಕ ಮನೆ ಮಾಡಿದೆ. ಇನ್ನು ಮಳೆಗಾಲ ಆರಂಭವಾಗುತ್ತಿದ್ದಂತೆ ಚಿಕೂನ್ ಗುನ್ಯಾ, ಡೆಂಗ್ಯೂ ಮತ್ತು ಮಲೇರಿಯಾ ರೋಗಗಳ ಹಾವಳಿ ಸಹ ಹೆಚ್ಚಾಗುವ ಸಾಧ್ಯತೆಯನ್ನು ಆರೋಗ್ಯ ಇಲಾಖೆ ವ್ಯಕ್ತಪಡಿಸಿದೆ.