ಶ್ರೀ ಧರ್ಮಸ್ಥಳ ದೇವಸ್ಥಾನ ಮಾದರಿಯಲ್ಲಿ ಮಂಟಪ ನಿರ್ಮಾಣ: ದುರ್ಗಾದೇವಿಗೆ ವಿಶಿಷ್ಟ ಪೂಜೆ - ಶ್ರೀ ದುರ್ಗಾದೇವಿ ಪ್ರತಿಷ್ಠಾನ ಮಾಡಿ ಪೂಜೆ
🎬 Watch Now: Feature Video
ದಾವಣಗೆರೆ: ಆಯುಧ ಪೂಜೆ ಹಿನ್ನೆಲೆ ವಿಭಿನ್ನವಾಗಿ ಧರ್ಮಸ್ಥಳ ದೇವಸ್ಥಾನ ಮಾದರಿ ಮಂಟಪ ನಿರ್ಮಿಸಿ ಪೂಜೆ ಸಲ್ಲಿಸಲಾಗಿದೆ. ನಗರದ ಹೊಂಡದ ವೃತ್ತದ ಬಳಿಯ ಬೆಸ್ಕಾಂ ಕಚೇರಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇಗುಲ ರೀತಿ ಮಂಟಪ ನಿರ್ಮಿಸಲಾಗಿತ್ತು. ಶ್ರೀ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಯಿತು. ವಿಭಾಗೀಯ ಬೆಸ್ಕಾಂ ಕಚೇರಿ ಮುಖ್ಯ ಅಧಿಕಾರಿ ಮುಕುಂದ್ ಹಾಗೂ ಸಿಬ್ಬಂದಿ ವರ್ಗ ದೇವಿ ಆರಾಧನೆ ಮಾಡಿದರು. ಪ್ರತಿ ವರ್ಷ ಕೂಡ ಕಚೇರಿಯಲ್ಲಿ ನಾಡಿನ ವಿಶೇಷತೆಯುಳ್ಳ ಮಂಟಪ ಮಾಡಿ ಪೂಜೆ ಸಲ್ಲಿಸುತ್ತಾ ಬರಲಾಗಿದೆ.