ಮಾತಾ ಮಾಣಿಕೇಶ್ವರಿ ಟ್ರಸ್ಟ್ ಆಸ್ತಿ ಕಬಳಿಸಲು ಹುನ್ನಾರ ಆರೋಪ - conspiracy to exploit property of Maniskeshwari Trust..?
🎬 Watch Now: Feature Video
ಕಲಬುರಗಿ: ನಡೆದಾಡುವ ದೇವರು ಎಂದೆ ಪ್ರಸಿದ್ಧಿಯಾದ ಯಾನಗುಂದಿಯ ಮಾತೆ ಮಾಣಿಕೇಶ್ವರಿ ಲಿಂಗಕ್ಯರಾಗಿ 48 ಗಂಟೆ ಕಳೆಯುವದರೊಳಗಾಗಿ ಮಠದ ಆಸ್ತಿಯ ಬಗ್ಗೆ ವಿವಾದ ಎದ್ದಿದೆ. ಮಾತಾ ಮಾಣಿಕೇಶ್ವರಿ ಟ್ರಸ್ಟ್ ಅಡಿಯಲ್ಲಿರುವ ಆಸ್ತಿಯನ್ನು ಕಬಳಿಸಲು ಟ್ರಸ್ಟ್ನ ಕೆಲ ಸದಸ್ಯರು ಹುನ್ನಾರ ನಡೆಸಿದ್ದಾರೆಂಬ ಆರೋಪ ದಟ್ಟವಾಗಿ ಕೇಳಿ ಬರುತ್ತಿದೆ. ಈ ಹಿನ್ನೆಲೆ ಮಾಣಿಕೇಶ್ವರಿ ಅವರ ಕುಟುಂಬಸ್ಥರಿಗೂ ಅಂತಿಮ ದರ್ಶನಕ್ಕೆ ತಡೆ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.