ಫ್ಲೈಓವರ್ ಯೋಜನೆ.. ಚೆನ್ನಮ್ಮ ಪುತ್ಥಳಿ ಎತ್ತರಿಸಲು ಕಾಂಗ್ರೆಸ್ ಮನವಿ - ಹುಬ್ಬಳ್ಳಿ ಇತ್ತೀಚಿನ ಸುದ್ದಿ
🎬 Watch Now: Feature Video
ಹುಬ್ಬಳ್ಳಿ: ಚೆನ್ನಮ್ಮ ವೃತ್ತದಲ್ಲಿ ಫ್ಲೈ ಓವರ್ ನಿರ್ಮಾಣ ಮಾಡುತ್ತಿರುವುದರಿಂದ ರಾಣಿ ಚೆನ್ನಮ್ಮ ಪುತ್ಥಳಿಗೆ ಅವಮಾನವಾಗಲಿದೆ. ಈ ಹಿನ್ನೆಲೆಯಲ್ಲಿ ಚೆನ್ನಮ್ಮ ಮೂರ್ತಿಯನ್ನು ಫ್ಲೈ ಓವರ್ನಿಂದ ಮೇಲಕ್ಕೆ ನಿರ್ಮಾಣ ಮಾಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಗೆ ಮನವಿ ಸಲ್ಲಿಸಿದರು. ಹುಬ್ಬಳ್ಳಿಯ ಖಾಸಗಿ ಹೊಟೇಲ್ನಲ್ಲಿ ಫ್ಲೈ ಓವರ್ ನಿರ್ಮಾಣಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಲಿದ್ದಾರೆ. ಆದ್ರೆ ಕಾಮಗಾರಿ ಆರಂಭಕ್ಕೂ ಮುನ್ನ ಚೆನ್ನಮ್ಮ ಪುತ್ಥಳಿಗೆ ಆಗುತ್ತಿರುವ ಅವಮಾನವನ್ನು ಪರಿಗಣಿಸಿ ಪುತ್ಥಳಿಯನ್ನು ಮೇಲಕ್ಕೇರಿಸಲು ಸಚಿವರಿಗೆ ಮನವಿ ಮಾಡಿದರು.