ಕೊಪ್ಪಳದಲ್ಲಿ ಸಂಪೂರ್ಣ ಲಾಕ್ಡೌನ್: ಗವಿಮಠದಿಂದ ಹಸಿದವರಿಗೆ ಆಹಾರ ವಿತರಣೆ - corona in koppal
🎬 Watch Now: Feature Video
ಕೊಪ್ಪಳ: ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿದೆ. ಹೀಗಾಗಿ ಅಗತ್ಯವಿರುವವರಿಗೆ ಗವಿಮಠದಿಂದ ಮಧ್ಯಾಹ್ನ ಹಾಗೂ ರಾತ್ರಿ ಊಟ ತಲುಪಿಸಲಾಗುತ್ತಿದೆ. ಶ್ರೀಗಳ ಅಪ್ಪಣೆಯಂತೆ ಕಳೆದ ಮೂರು ದಿನಗಳಿಂದ ಗವಿಮಠದ ವಿದ್ಯಾರ್ಥಿ ನಿಲಯದಲ್ಲಿ ಆಹಾರ ಸಿದ್ಧಪಡಿಸಿ, ಅದನ್ನು ಪ್ಯಾಕೇಟ್ ಮಾಡಿ ಅಗತ್ಯ ಇದ್ದವರಿಗೆ ವಿತರಿಸಲಾಗುತ್ತಿದೆ. ಗವಿಮಠದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆದು ಸೋಂಕಿತರಿಗೆ ಶ್ರೀಗಳು ಅನುಕೂಲವನ್ನು ಸಹ ಮಾಡಿಕೊಟ್ಟಿದ್ದಾರೆ.