ವಿಡಿಯೋ: ನಡುರಸ್ತೆಯಲ್ಲೇ ನಾಗರ ಹಾವುಗಳ ಸರಸ-ಸಲ್ಲಾಪ! - ಹಾವುಗಳ ಸರಸ ಸಲ್ಲಾಪ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8315028-511-8315028-1596704081689.jpg)
ಕಲಬುರಗಿ: ನಡುರಸ್ತೆಯಲ್ಲೇ ಹಾವುಗಳೆರಡು ಸರಸ ಸಲ್ಲಾಪಲ್ಲಿ ತೊಡಗಿರುವ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ. ಜಿಲ್ಲೆಯ ಚಿಂಚೋಳಿ ತಾಲೂಕಿನ ರಾಯಕೋಡ್ ಗ್ರಾಮದಲ್ಲಿ ಸರ್ಪಗಳೆರೆಡು ಪ್ರಕೃತಿಯ ಮಡಿಲಲ್ಲಿ ಮೈಮರೆತು ಸರಸದಲ್ಲಿ ತೊಡಗಿದ್ದವು. 10 ರಿಂದ 15 ಅಡಿ ಉದ್ದದ ಎರಡು ಹಾವುಗಳು ಸುಮಾರು 1 ಗಂಟೆಗಳ ಕಾಲ ಸರಸ - ಸಲ್ಲಾಪದಲ್ಲಿ ನಿರತವಾಗಿದ್ದವು. ನಾಲ್ಕೈದು ಅಡಿ ಎತ್ತರಕ್ಕೆ ಜಿಗಿದು ಸರಸದಲ್ಲಿ ತಲ್ಲೀನವಾಗಿದ್ದ ಹಾವುಗಳ ಸಲ್ಲಾಪ ವೀಕ್ಷಿಸಲು ಜನ ಮುಗಿಬಿದ್ದರು. ನೂರಾರು ಜನ ಜಮಾಯಿಸಿದ್ದರೂ ಡೋಂಟ್ ಕೇರ್ ಎನ್ನದ ಹಾವುಗಳು ತಮ್ಮಷ್ಟಕ್ಕೆ ತಾವು ಸರಸದಲ್ಲಿ ಮಗ್ನವಾಗಿದ್ದವು. ಹಾವುಗಳು ಸರಸವಾಡುತ್ತಿರುವುದನ್ನು ಸ್ಥಳೀಯ ಯುವಕರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.