ಶಿವಮೊಗ್ಗ: ಸಿಎಂ ಆಗಮನ ಹಿನ್ನೆಲೆ ಕಲ್ಲು ಕ್ವಾರಿ ಬಳಿ ತರಾತುರಿಯಲ್ಲಿ ರಸ್ತೆ ರಿಪೇರಿ - Shivamogga latest news
🎬 Watch Now: Feature Video
ಶಿವಮೊಗ್ಗ: ಹುಣಸೋಡು ಬಳಿ ಕ್ರಷರ್ನಲ್ಲಿ ನಡೆದ ಸ್ಫೋಟ ಪ್ರಕರಣ ಸಂಬಂಧ ಸಿಎಂ ಯಡಿಯೂರಪ್ಪ ಇಂದು ಕ್ರಷರ್ಗೆ ಭೇಟಿ ನೀಡಿದ್ದಾರೆ. ಸಿಎಂ ಭೇಟಿ ಹಿನ್ನೆಲೆ ಸಂಪೂರ್ಣ ಧೂಳುಮಯವಾಗಿರುವ ಮತ್ತು ಹಳ್ಳ-ತಗ್ಗಿನಿಂದ ಕೂಡಿರುವ ಕ್ರಷರ್ ತಲುಪುವ ರಸ್ತೆಯನ್ನು ಜಿಲ್ಲಾಡಳಿತ ತರಾತುರಿಯಲ್ಲಿ ರಿಪೇರಿ ಮಾಡಿದೆ. ಈಗಾಗಲೇ ಪೊಲೀಸ್ ಡಾಗ್ ಹಾಗೂ ಬಾಂಬ್ ಪತ್ತೆ ತಂಡ ಕಲ್ಲು ಕ್ವಾರಿ ಸುತ್ತಮುತ್ತ ಪರಿಶೀಲನೆ ನಡೆಸಿದೆ. ಕಲ್ಲು ಕ್ವಾರಿಗೆ ಭೇಟಿ ನಂತರ ಸಿಎಂ ಇಂದು ಸಂಜೆ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಪುತ್ರನ ಮದುವೆಯಲ್ಲಿ ಭಾಗಿಯಾಗಿ ಶಿವಮೊಗ್ಗದಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ. ಭಾನುವಾರ ಬೆಳಗ್ಗೆ ಶಿವಮೊಗ್ಗದಿಂದ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.