ಜನತಾ ಕರ್ಪ್ಯೂ ನಡುವೆ ಬೆಳಗಾವಿಯಲ್ಲಿ ಪಾಲಿಕೆ ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯ
🎬 Watch Now: Feature Video
ಬೆಳಗಾವಿ: ಜನತಾ ಕರ್ಪ್ಯೂಗೆ ಕುಂದಾನಗರಿ ಜನತೆ ಬೆಂಬಲ ನೀಡಿ ಮನೆಯಲ್ಲಿ ಕುಳಿತಿದ್ದಾರೆ. ಇತ್ತ ಮಹಾನಗರ ಪಾಲಿಕೆ ಸಿಬ್ಬಂದಿ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದೆ. ಕೊರೊನಾ ಸೋಂಕು ಹರಡದಂತೆ ನಗರದ ಪ್ರಮುಖ ರಸ್ತೆ, ಬಸ್ ಶೆಲ್ಟರ್, ದೇವಸ್ಥಾನಗಳನ್ನು ಮಲ್ಟಿ ಪರ್ಪಸ್ ಜಟ್ಟಿಂಗ್ ಮಷಿನ್ ವಾಹನ ಬಳಸಿ ಸ್ಪ್ರೆ ಮಾಡಲಾಗುತ್ತಿದೆ. ನೀರಲ್ಲಿ ಕ್ಲೋರಿನ್ ಹಾಗೂ ಡೆಟಾಲ್ ಹಾಕಿ ಪ್ರಮುಖ ರಸ್ತೆ, ದೇವಸ್ಥಾನಗಳಿಗೆ ಸಿಂಪಡಿಸಲಾಗುತ್ತಿದೆ.