ಉಡುಪಿ: ಕ್ರಿಸ್​ಮಸ್ ಪ್ರಯುಕ್ತ ಚರ್ಚ್​​ಗಳಲ್ಲಿ ವಿಶೇಷ ಪ್ರಾರ್ಥನೆ - ಚರ್ಚ್​​ಗಳಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಪೂಜೆ

🎬 Watch Now: Feature Video

thumbnail

By

Published : Dec 25, 2020, 6:59 PM IST

ಉಡುಪಿ: ಕ್ರೈಸ್ತರ ಪವಿತ್ರ ಹಬ್ಬ ಕ್ರಿಸ್​ಮಸ್​ಅನ್ನು ಉಡುಪಿಯ ಚರ್ಚ್​ಗಳಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಡಿಸೆಂಬರ್ 24ರ ರಾತ್ರಿ ವಿಶೇಷ ಪೂಜೆ ನೆರವೇರಿಸಲಾಗಿದ್ದು, ಇಂದು ಜಿಲ್ಲೆಯ 53 ಚರ್ಚ್​​ಗಳಲ್ಲಿ ವಿಶೇಷ ಪ್ರಾರ್ಥನೆ, ಪೂಜೆ ನಡೆಯುತ್ತಿದೆ. ಉಡುಪಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ ಕ್ರಿಸ್​ಮಸ್​​ ಹಿನ್ನೆಲೆಯಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಕಲ್ಯಾಣಪುರ ಚರ್ಚ್ ಹಾಲ್​ನಲ್ಲಿ ಬಿಷಪ್ ನೆರವೇರಿಸಿದ ವಿಶೇಷ ಪೂಜೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡರು. ಯೇಸುವಿನ ಜನನದ ಪ್ರಾತ್ಯಕ್ಷಿಕೆಯನ್ನು ಚರ್ಚ್ ಹಾಲ್​ನಲ್ಲಿ ನಡೆಸಲಾಯ್ತು. ಯೇಸು ಹುಟ್ಟಿದ್ದ ದಿನವನ್ನು ರೂಪಕದ ಮೂಲಕ ತೋರ್ಪಡಿಸಲಾಯ್ತು. ಯೇಸು ಇಡೀ ಲೋಕಕ್ಕೆ ಭರವಸೆ. ದೇವರು ಶಾಂತಿಯ ಪ್ರತಿರೂಪ. ಕ್ರಿಸ್​ಮಸ್​​​ ಹಬ್ಬದ ನಂತರ ಲೋಕಕ್ಕೆ ಅಪ್ಪಳಿಸಿದ ಗಂಡಾಂತರ ದೂರಾಗಲಿ ಎಂದು ಬಿಷಪ್ ಹಾರೈಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.