ಚಿಕ್ಕಬಳ್ಳಾಪುರದಲ್ಲಿ ಮಕ್ಕಳಿಗಾಗಿ ನಿರ್ಮಾಣವಾಯ್ತು ಗ್ರಂಥಾಲಯ! - inauguration
🎬 Watch Now: Feature Video
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮಕ್ಕಳ ಲೈಬ್ರರಿಯನ್ನು ಉದ್ಘಾಟನೆ ಮಾಡಲಾಯಿತು. ಜಿಲ್ಲೆಯ ಹೃದಯ ಭಾಗದಲ್ಲಿರುವ ಈ ಲೈಬ್ರರಿಯನ್ನು 1962ರಲ್ಲಿ ನೆಹರುರವರು ಸಾರ್ವಜನಿಕರ ಗ್ರಂಥಾಲಯದ ಕಟ್ಟಡವಗಿ ಉದ್ಘಾಟನೆ ಮಾಡಿದ್ದರು. ಆದಾದ ಬಳಿಕ ಅದು ಮೂಲೆ ಗುಂಪಾಗಿತ್ತು. ಕಟ್ಟಡವನ್ನು ಕೆಡವದೆ ಸಾರ್ವಜನಿಕರ ಉಪಯೋಗಕ್ಕಾಗಿ ಮೀಸಲಾಗಿಟ್ಟಿದ್ದು, ಈಗ ಮಕ್ಕಳಿಗಾಗಿ ಲೈಬ್ರರಿಯನ್ನಾಗಿ ನವೀಕರಿಸಲಾಗಿದೆ.
ಹಳೆ ಕಟ್ಟಡವಾದ್ರು ಈಗ ಬಣ್ಣಬಣ್ಣಗಳಿಂದ ಕಂಗೊಳಿಸುತ್ತಿದೆ. ಗೋಡೆಗಳ ಮೇಲೆ ಚಿಣ್ಣರ ಚಿತ್ತಾರಗಳು, ಗೊಂಬೆಗಳು ಎಲ್ಲರನ್ನು ಆಕರ್ಷಿಸುತ್ತಿದ್ದು, ಇನ್ನೂ ಕಟ್ಟಡ ಚಿಕ್ಕದಾಗಿದ್ದರೂ ಚೊಕ್ಕವೆಂಬಂತೆ ಸೊಗಸಾಗಿ ರೂಪುಗೊಂಡಿದೆ.