ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಸಂಭ್ರಮದ ಕ್ರಿಸ್‌ಮಸ್ ಆಚರಣೆ - ಕ್ರೈಸ್ತರು ಚರ್ಚ್‌ಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10008584-600-10008584-1608915938085.jpg)
ಜಿಲ್ಲೆಯ ವಿವಿಧೆಡೆ ಕ್ರಿಶ್ಚಿಯನ್ ಬಾಂಧವರು ಕ್ರಿಸ್‌ಮಸ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದ್ದಾರೆ. ತಮ್ಮ ಮನೆಗಳ ಮುಂದೆ ಆಕರ್ಷಕ ಏಸು ಕ್ರಿಸ್ತ ಜನನದ ವೃತ್ತಾಂತವನ್ನು ತಿಳಿಸುವ ಗೋದಲಿಗಳನ್ನು ನಿರ್ಮಿಸಿ ನಾನಾ ಬಗೆಯ ಅಲಂಕಾರ ಮಾಡಿ ನಕ್ಷತ್ರ, ಕ್ರಿಸ್‌ಮಸ್ ಟ್ರೀ, ಬಗೆ ಬಗೆಯ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರು. ಕ್ರೈಸ್ತರು ಚರ್ಚ್‌ಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ಮೇಣದ ಬತ್ತಿಗಳನ್ನು ಹಚ್ಚಿ ಏಸು ಕ್ರಿಸ್ತನಿಗೆ ನಮಿಸಿದರು.