ಕೇಂದ್ರ ಬಜೆಟ್ ಕುರಿತು ಚಿಕ್ಕಮಗಳೂರು ಜನರ ಅಭಿಪ್ರಾಯವಿದು.. - ಕೇಂದ್ರ ಬಜೆಟ್ ಕುರಿತು ಚಿಕ್ಕಮಗಳೂರು ಜನರ ಅಭಿಪ್ರಾಯ
🎬 Watch Now: Feature Video
ಚಿಕ್ಕಮಗಳೂರು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಕುರಿತು ಚಿಕ್ಕಮಗಳೂರು ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಜೆಟ್ನಿಂದ ಯಾವುದೇ ರೀತಿಯಾದ ಆಶಾ ಭಾವನೆ ವ್ಯಕ್ತವಾಗುತ್ತಿಲ್ಲ. ಆದಾಯ ಮಿತಿ ಏರಿಕೆ ಮಾಡಬೇಕಾಗಿತ್ತು. ನ್ಯಾಷನಲ್ ಪೊಲೀಸ್ ವಿಶ್ವವಿದ್ಯಾಲಯ ತೆರೆಯುತ್ತಿರೋದು, ಮೆಡಿಕಲ್ ಕಾಲೇಜುಗಳು, ಹಾಗೂ ಜನರಿಕ್ ಔಷಧಿ ಕೇಂದ್ರಕ್ಕೆ ಒತ್ತು ನೀಡಿರೋದು ಸ್ವಾಗತಾರ್ಹ. ರೈಲಿಗೆ ಹೆಚ್ಚಿನ ಒತ್ತು ನೀಡಬೇಕಿತ್ತು. ಕಾಫೀ ಬೆಳೆಗಾರರ ಸಮಸ್ಯೆ ಬಗ್ಗೆ ಹೆಚ್ಚು ಗಮನ ನೀಡಬೇಕಿತ್ತು ಎಂಬ ಅಭಿಪ್ರಾಯಗಳು ಚಿಕ್ಕಮಗಳೂರು ಜನರಿಂದ ವ್ಯಕ್ತವಾದವು.