ಚಿಕ್ಕಮಗಳೂರಲ್ಲಿ 43 ಜನರಿಗೆ ಸೋಂಕು, 154 ಗುಣಮುಖ - ಚಿಕ್ಕಮಗಳೂರು ಜಿಲ್ಲೆ ಕೋವಿಡ್ ವರದಿ
🎬 Watch Now: Feature Video
ಜಿಲ್ಲೆಯಲ್ಲಿ ನಿನ್ನೆ 43 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ 334ಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ನಿನ್ನೆ 18 ಜನ ಗುಣಮುಖರಾಗಿದ್ದಾರೆ. ಈವರೆಗೂ ಜಿಲ್ಲೆಯಲ್ಲಿ ಒಟ್ಟು 154 ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಚಿಕ್ಕಮಗಳೂರು ತಾಲೂಕಿನಲ್ಲಿ 12, ತರೀಕೆರೆ 5, ಕಡೂರು 4, ಎನ್ಆರ್‌ಪುರ 2, ಕೊಪ್ಪ17 ಹಾಗೂ ಶೃಂಗೇರಿಯ ಮೂವರಲ್ಲಿ ಸೋಂಕು ಕಾಣಿಸಿದೆ. ಸತ್ತವರ ಸಂಖ್ಯೆ ಈವರೆಗೂ 9ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 334ಕ್ಕೆ ಏರಿದೆ. ಒಟ್ಟು 171 ಸಕ್ರಿಯ ಪ್ರಕರಣಗಳಿವೆ. ಈ ಕುರಿತು ನಮ್ಮ ಪ್ರತಿನಿಧಿ ಪ್ರತ್ಯಕ್ಷ ವರದಿ ನೀಡಿದ್ದಾರೆ.