ಕುಕ್ಕೆಯಲ್ಲಿ ವಾರ್ಷಿಕ ಚಂಪಾ ಷಷ್ಠಿ ಜಾತ್ರಾ ಮಹೋತ್ಸವದ ರಥಗಳಿಗೆ ವಿಶೇಷ ಪೂಜಾ ಕಾರ್ಯಕ್ರಮ - ಕುಕ್ಕೆಯಲ್ಲಿ ರಥಗಳಿಗೆ ಗೂಟ ಪೂಜೆ ಕಾರ್ಯಕ್ರಮ ಸುದ್ದಿ
🎬 Watch Now: Feature Video
ವಿಶ್ವವಿಖ್ಯಾತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾ ಷಷ್ಠಿ ಜಾತ್ರಾ ಮಹೋತ್ಸವದ ವೇಳೆ ಎಳೆಯುವ ರಥಗಳಿಗೆ ಕಾರ್ತಿಕ ಹುಣ್ಣಿಮೆ ದಿನವಾದ ಮಂಗಳವಾರ ಪೂಜಾ ಮುಹೂರ್ತವನ್ನು ವಿವಿಧ ವೈಧಿಕ ವಿಧಾನಗಳ ಮೂಲಕ ನೆರವೇರಿಸಲಾಯಿತು. ಶ್ರೀ ದೇಗುಲದಲ್ಲಿ ಪೂಜೆ ನೆರವೇರಿದ ಬಳಿಕ ಜಾತ್ರಾ ಸಮಯದಲ್ಲಿ ಎಳೆಯುವ ಬ್ರಹ್ಮರಥ ಮತ್ತು ಪಂಚಮಿ ರಥಗಳನ್ನು ನಿರ್ಮಿಸಲು ಪೂಜಾ ಮುಹೂರ್ತಗಳು ನಡೆದ ಬಳಿಕ ರಥಗಳಿಗೆ ವಿವಿಧ ವೈದಿಕ ವಿಧಿ ವಿಧಾನಗಳೊಂದಿಗೆ ಪೂಜೆ ನಡೆಸಲಾಯಿತು.