25 ವರ್ಷಗಳ ಬಳಿಕ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಚಂಡಿಕಾಯಾಗ..! - Chandika yaaga
🎬 Watch Now: Feature Video
ಬೆಳ್ತಂಗಡಿ: ಕಳೆದ 25 ವರ್ಷಗಳ ಹಿಂದೆ ನಡೆದ ಆಯತ ಚಂಡಿಕಾ ಯಾಗದ ನೆನಪಿಗಾಗಿ ಕೊಪ್ಪ ದಿ!ಬಾಲಗೋಪಾಲ ಜೋಯಿಸರ ಶಿಷ್ಯರಾದ ಬಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಇತಿಹಾಸ ಪ್ರಸಿದ್ಧ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಚಂಡಿಕಾಯಾಗ ನಡೆಯಿತು. 25 ವರ್ಷಗಳ ಹಿಂದೆ ನಡೆದಿದ್ದ ಈ ಯಾಗವು ದೇಶಾದ್ಯಂತ ಹೆಸರುವಾಸಿಯಾಗಿತ್ತು ಈ ನೆನಪಿಗಾಗಿ ಅವರ ಶಿಷ್ಯರಾದ ಬಾನು ಪ್ರಕಾಶ್ ಶರ್ಮಾ ಹಾಗೂ ಇತರ ಶಿಷ್ಯ ವೃಂದದವರಿಂದ ವಿವಿಧ ಧಾರ್ಮಿಕ ವಿಧಿಗಳೊಂದಿಗೆ ಚಂಡಿಕಾಯಾಗವು ನೆರವೇರಿತು. ಈ ಸಂದರ್ಭದಲ್ಲಿ ಮುಳಬಾಗಿಲು ತೀರ್ಥಹಳ್ಳಿ ಶಾಖಾಮಠದ ಕೃಷ್ಣಾನಂದ ಸ್ವಾಮೀಜಿ, ಆಗಿನ ಆಯತಾಚಂಡಿಕಾ ಯಾಗದ ಕೆಲವು ಪದಾಧಿಕಾರಿಗಳು ಹಾಗೂ ದೇವಸ್ಥಾನದ ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
Last Updated : Feb 5, 2021, 7:47 PM IST