ಗಾಯಗೊಂಡು ಮಲಗಿದ್ದ ಹುಲಿಗೆ ಬಲೆ ಹಾಕಿದ ಅರಣ್ಯ ಇಲಾಖೆ... ನಿಟ್ಟುಸಿರು ಬಿಟ್ಟ ಜನ - tiger news
🎬 Watch Now: Feature Video
ಮಡಿಕೇರಿ: ಗಾಯಗೊಂಡಿದ್ದ ಹುಲಿಯನ್ನು ಸೆರೆ ಹಿಡಿದಿರುವ ಘಟನೆ ವೀರಾಜಪೇಟೆ ತಾಲೂಕಿನ ಸುಳುಗೋಡು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೆರೆಯ ಬಳಿಯಿದ್ದ ಎಂಟು ವರ್ಷದ ಗಂಡು ಹುಲಿಗೆ ಅರಿವಳಿಕೆ ನೀಡಿ ಸೆರೆ ಹಿಡಿದು ಮೈಸೂರಿನ ಮೃಗಾಲಯಕ್ಕೆ ರವಾನಿಸಲಾಗಿದೆ. ಸ್ಥಳೀಯರ ಮಾಹಿತಿ ಆಧರಿಸಿ ಸಿಸಿಎಫ್ ಹೀರಾಲಾಲ್ ಸೇರಿದಂತೆ ಅರಣ್ಯಾಧಿಕಾರಿಗಳ ತಂಡ ಹುಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಹಲವು ದಿನಗಳಿಂದ ಸಾಕಷ್ಟು ಹಸುಗಳನ್ನು ಕೊಂದು ತಿಂದು ವ್ಯಾಪ್ತಿಯ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದ ಹುಲಿಯನ್ನು ಸೆರೆ ಹಿಡಿದಿರುವುದರಿಂದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.