ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಕ್ಯಾಂಡಲ್ ಬೆಳಗಿ ಶ್ರದ್ಧಾಂಜಲಿ - ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ
🎬 Watch Now: Feature Video

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರಯೋಧರಿಗೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ ಯುವಕರು ಭಾನುವಾರ ರಾತ್ರಿ ಕ್ಯಾಂಡಲ್ ಬೆಳಗಿ ಗೌರವ ಸಲ್ಲಿಸಿದರು. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಪುಲ್ವಾಮಾ ದಾಳಿ ನಡೆದು 2 ವರ್ಷವಾದ ಹಿನ್ನೆಲೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ 40 ವೀರಯೋಧರ ಬಲಿದಾನ ನೆನೆದು ಕ್ಯಾಂಡಲ್ ಲೈಟ್ ಹಿಡಿದು ಭಾರತ ಮಾತಾಕಿ ಜೈ, ಜೈಹಿಂದ್ ಘೋಷಣೆಗಳು ಮೊಳಗಿದವು. ಗ್ರಾಮದ ಹಳೆ ಬಸ್ ನಿಲ್ದಾಣದಿಂದ ಶರಣಬಸವೇಶ್ವರ ದೇವಸ್ಥಾನ, ಮಾರುತೇಶ್ವರ ದೇವಸ್ಥಾನ, ಅಕ್ಕಮಹಾದೇವಿ ಪಾದಗಟ್ಟಿ, ಕೊಣ್ಣೂರು ಸಿದ್ದೇಶ್ವರ, ದ್ಯಾಮಾಂಭಿಕಾ ದೇವಸ್ಥಾನವರೆಗೆ ಸಂಚರಿಸಿದರು.