ಟಿಕ್ ಟಾಕ್ಗಾಗಿ ಕೃಷ್ಣಾ ನದಿಗೆ ಹಾರಿ ಹುಡುಗರ ದುಸ್ಸಾಹಸ! - ಯಾದಗಿರಿ ಜಿಲ್ಲೆ
🎬 Watch Now: Feature Video
ಕೃಷ್ಣಾ ನದಿ ನೀರಿನ ಪ್ರವಾಹ ಕಡಿಮೆಯಾಗುತ್ತಿದ್ದಂತೆ ಪಡ್ಡೆ ಹುಡುಗರು ಟಿಕ್ ಟಾಕ್ಗಾಗಿ ದುಸ್ಸಾಹಕ್ಕೆ ಕೈ ಹಾಕಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನ ದೇವಾಪುರ ಗ್ರಾಮವು ಕೃಷ್ಣಾ ನದಿ ನೀರಿನ ಪ್ರವಾಹದಿಂದ ಸಂಪೂರ್ಣವಾಗಿ ಜಲವೃತವಾಗಿತ್ತು. ನಡುಗಡ್ಡೆಯಾಗಿ ಮಾರ್ಪಟ್ಟಿದ್ದ ದೇವಾಪುರ ಗ್ರಾಮದಲ್ಲಿ ಜಿಲ್ಲಾಡಳಿತ ಕೃಷ್ಣಾ ಹಾಗೂ ಭೀಮಾ ನದಿ ಪ್ರವಾಹದಲ್ಲಿ ಈಜಾಟ ನಡೆಸದಂತೆ ಡಂಗೂರ ಸಾರಿದರೂ ಹುಡುಗರು ತಲೆ ಕೆಡಸಿಕೊಂಡಂತಿಲ್ಲ.