ಕಂಪ್ಲಿ ಪೀರಲ ದೇವರ ಮೇರವಣಿಗೆ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವು - Bellary district news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4394596-thumbnail-3x2-kampgli.jpg)
ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ಮೊಹರಂ ಹಬ್ಬದ ಕತ್ತಲರಾತ್ರಿ ನಿಮಿತ್ತ ಪೀರಲ ದೇವರ ಮೆರವಣಿಗೆ ವೇಳೆ ಮಸೀದಿಗೆ ಹಾಕಲಾಗಿದ್ದ ವಿದ್ಯುತ್ ದೀಪದ ವೈಯರ್ ತಗುಲಿ ನಗರದ ತಳವಾರ ಓಣಿಯ ನಿವಾಸಿ ಕುಮಾರ ಉಪ್ಪಾರ (24) ಮೃತಪಟ್ಟಿದ್ದಾನೆ. ಇನ್ನು ಮರಣೋತ್ತರ ಪರೀಕ್ಷೆಗಾಗಿ ಯುವಕನ ದೇಹವನ್ನು ಕಂಪ್ಲಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆಸ್ಪತ್ರೆಗೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ ಭೇಟಿ ನೀಡಿ ಮೃತ ಯುವಕನ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.