ಮೀನುಗಾರಿಕೆಗೆ ತೆರಳಿದ್ದ ಪಾತಿ ದೋಣಿ ಮುಳುಗಡೆ: ಕರಾವಳಿ ಕಾವಲು ಪಡೆಯಿಂದ ರಕ್ಷಣೆ
🎬 Watch Now: Feature Video
ಭಟ್ಕಳದ ಅಳ್ವೇಕೋಡಿಯಿಂದ ಬೆಳಗ್ಗೆ ಮೀನುಗಾರಿಕೆಗೆ ತೆರಳಿದ್ದ ಪಾತಿ ದೋಣಿಯೊಂದು ಕಾಗೆಗುಡ್ಡದ ಸಮೀಪ ಸಮುದ್ರದಲ್ಲಿ ಮುಳುಗಡೆಯಾಗಿದೆ. ಯಾದವ ಮಂಜು ಮೊಗೇರ ಮಾಲೀಕತ್ವದ ‘ಮತ್ಸ್ಯ ನಿಧಿ’ ದೋಣಿ ಇದಾಗಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಕರಾವಳಿ ಕಾವಲು ಪಡೆ ಸಿಬ್ಬಂದಿ, ಮೀನುಗಾರರ ಪಾತಿ ದೋಣಿಯನ್ನು ರಕ್ಷಿಸಿ ದಡಕ್ಕೆ ತಲುಪಿಸಿದ್ದಾರೆ. ಕರಾವಳಿ ಕಾವಲು ಪಡೆಯ ಕ್ಯಾಪ್ಟನ್ ಮಲ್ಲಪ್ಪ ಗದ್ದಿಗೌಡರ್, ಸಿಬ್ಬಂದಿ ಸಂಜೀವ ನಾಯ್ಕ, ದಿನೇಶ ನಾಯ್ಕ, ಜನಾರ್ದನ ಮೊಗೇರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.