ಮೂರು ಬಾರಿ ನಮಸ್ಕರಿಸಿ, ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ - ಮಂಡ್ಯ ಉಪಚುನಾವಣಾ ಕ್ಷೇತ್ರ
🎬 Watch Now: Feature Video
ಮಂಡ್ಯ: ಪತ್ನಿ ಹಾಗೂ ಮಗಳ ಜೊತೆ ಮತಗಟ್ಟೆಗೆ ಆಗಮಿಸಿದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ, ಶುಭಗಳಿಗೆಯಲ್ಲಿ ಮತದಾನ ಮಾಡಿದ್ರು. ಮತದಾನಕ್ಕೂ ಮೊದಲು ಪಾದರಕ್ಷೆಗಳನ್ನು ಬಿಟ್ಟು ಮತಯಂತ್ರಕ್ಕೆ ಮೂರು ಬಾರಿ ಮುಟ್ಟಿ ನಮಸ್ಕಾರ ಮಾಡಿ ಪೂಜೆ ಸಲ್ಲಿಸಿದರು. ಮತದಾನದ ಬಳಿಕ ವಿಜಯದ ಸಂಕೇತ ತೋರಿಸಿಕೊಂಡು ಹೊರ ಬಂದ ದಂಪತಿ, ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.