ಸೇತುವೆ ದಾಟುವಾಗ ಕೊಚ್ಚಿ ಹೋದ ಬೈಕ್: ಕೂದಲೆಳೆ ಅಂತರದಲ್ಲಿ ಸವಾರರು ಪಾರು- ವಿಡಿಯೋ
🎬 Watch Now: Feature Video
ತುಮಕೂರು ಜಿಲ್ಲೆಯಲ್ಲಿ ಅನೇಕ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಅನೇಕ ಅವಾಂತರಗಳು ಹಾಗೂ ಸಾವು-ನೋವುಗಳು ಸಂಭವಿಸುತ್ತಿವೆ. ಕೊರಟಗೆರೆ ತಾಲೂಕಿನ ಮಲಪ್ಪನಹಳ್ಳಿ ದೊಡ್ಡ ಹಳ್ಳದಲ್ಲಿ ನದಿ ನೀರು ದಾಟುತ್ತಿದ್ದ ಸಂದರ್ಭದಲ್ಲಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಿದ್ದ ಬೈಕನ್ನು ರಕ್ಷಿಸಲು ಜನರು ಹರಸಾಹಸಪಟ್ಟ ಘಟನೆ ನಡೆದಿದೆ. ಬೈಕ್ನಲ್ಲಿ ಹೋಗುತ್ತಿದ್ದ ಮೂವರು ನೀರಿನ ರಭಸಕ್ಕೆ ಕೆಳಗೆ ಬಿದ್ದಿದ್ದಾರೆ. ನಂತರ ನೀರಿನ ಸೆಳೆತ ಹೆಚ್ಚಾಗಿದ್ದು, ಈ ಸಮಯದಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ ಉಳಿಸಿಕೊಳ್ಳಲು ಸಂಕಷ್ಟ ಅನುಭವಿಸಿದರು. ಆದರೆ ನೀರಿನ ರಭಸಕ್ಕೆ ಬೈಕ್ ಕೊಚ್ಚಿ ಹೋಯಿತು.