ಮುಷ್ಕರ ಹತ್ತಿಕ್ಕಲು ಸರ್ಕಾರದಿಂದ ಪೊಲೀಸರ ಬಳಕೆ: ಪ್ರತಿಭಟನಾಕಾರರ ಆರೋಪ - ಬೆಂಗಳೂರು ಭಾರತ್ ಬಂದ್ ಸುದ್ದಿ
🎬 Watch Now: Feature Video
ಬೆಂಗಳೂರು: ಭಾರತ್ ಬಂದ್ ವೇಳೆ ಸರ್ಕಾರವು ಪೊಲೀಸರ ಮೂಲಕ ಪ್ರತಿಭಟನಾಕಾರರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಪ್ರತಿಭಟನಾನಿರತರ ಮೇಲೆ ಪ್ರಕರಣ ದಾಖಲಿಸುವುದು, ಬಂಧಿಸುವ ಮೂಲಕ ದೌರ್ಜನ್ಯ ಮಾಡಲಾಗುತ್ತಿದೆ ಎಂದು ಟೌನ್ ಹಾಲ್ ಮುಂಭಾಗದಲ್ಲಿ ನಡೆದ ಪ್ರತಿಭಟನೆ ವೇಳೆ ಸಿಐಟಿಯು ರಾಜ್ಯ ಉಪಾಧ್ಯಕ್ಷೆ ಲೀಲಾವತಿ ಆರೋಪಿಸಿದರು. ಹಾಗೆಯೇ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇರುವುದರಿಂದ ಪ್ರತಿಭಟನೆಗೆ ಅವಕಾಶ ನೀಡುತ್ತಿಲ್ಲ ಎಂದು ಜನವಾದಿ ಮಹಿಳಾ ಸಂಘಟನೆಯ
ಮುಖಂಡೆ ಗೌರಮ್ಮ ಈಟಿವಿ ಭಾರತ್ಗೆ ಪ್ರತಿಕ್ರಿಯಿಸಿದರು.