ಡಿ.ಜೆ. ಹಳ್ಳಿಯಲ್ಲಿ ಹತೋಟಿಗೆ ಬಂದ ಪರಿಸ್ಥಿತಿ: ಎಲ್ಲೆಡೆ ಖಾಕಿ ಕಣ್ಗಾವಲು - ಬೆಂಗಳೂರು ಗಲಭೆ ಸುದ್ದಿ
🎬 Watch Now: Feature Video
ಬೆಂಗಳೂರು: ಸಾಮಾಜಿಕ ಜಾಲತಾಣದ ಪೋಸ್ಟ್ ಒಂದಕ್ಕೆ ಸಂಬಂಧಪಟ್ಟಂತೆ ನಿನ್ನೆ ರಾತ್ರಿ ನಗರದ ಡಿ.ಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೊಡ್ಡಮಟ್ಟದ ಗಲಭೆ ನಡೆದು ಮೂವರು ಬಲಿಯಾಗಿದ್ದು, ಉದ್ರಿಕ್ತರ ಗುಂಪು ಬೆಂಕಿ ಹಚ್ಚಿದ ಪರಿಣಾಮ ಪೊಲೀಸರ ವಾಹನ ಸೇರಿದಂತೆ ಹಲವು ವಾಹನಗಳು ಸುಟ್ಟು ಕರಕಲಾಗಿವೆ. ಪೊಲೀಸ್ ಠಾಣೆಗೂ ಹಾನಿಯಾಗಿದೆ. ಸದ್ಯ ಪರಿಸ್ಥಿತಿ ಹತೋಟಿಗೆ ಬಂದಿದೆ. ಆದರೂ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಎಲ್ಲೆಡೆ ಖಾಕಿ ಕಟ್ಟೆಚ್ಚರ ವಹಿಸಲಾಗಿದೆ. ಸದ್ಯ ಸ್ಥಳದಲ್ಲಿ ಪರಿಸ್ಥಿತಿ ಯಾವ ರೀತಿ ಇದೆ ಎಂಬುವುದರ ಕುರಿತು ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.