ಕರಡಿ ದಾಳಿ: ರೈತನಿಗೆ ಗಂಭಿರ ಗಾಯ - ರೈತನಿಗೆ ಗಂಭೀರ ಗಾಯ
🎬 Watch Now: Feature Video
ದಾವಣಗೆರೆ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಓಬಪ್ಪನ ಮೇಲೆ ಕರಡಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಜಗಳೂರು ತಾಲೂಕಿನ ಬೈರಾನಾಯಕನಹಟ್ಟಿ ಗ್ರಾಮದಲ್ಲಿ ನಡೆದಿದೆ. ಕರಡಿ ರೈತನ ಮೇಲೆ ಎರಗಿ ತಲೆ, ಕಿವಿ,ಕಾಲು, ಮುಖದ ಭಾಗಕ್ಕೆ ಕಚ್ಚಿದೆ. ಕರಡಿ ಜತೆ ಸೆಣಸಾಡಿ ತಪ್ಪಿಸಿಕೊಂಡು ಗ್ರಾಮಕ್ಕೆ ರೈತ ಓಡಿ ಬಂದಿದ್ದಾನೆ, ಗಂಭೀರವಾಗಿ ಗಾಯಗೊಂಡ ರೈತನನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.