ಹಾವೇರಿ ಜಿಲ್ಲೆಯಲ್ಲಿ ಹೆಚ್ಚಿದ ಕೊರೊನಾ: ಸುರಕ್ಷಿತವಾಗಿರಲು ಸಚಿವ ಬಿ.ಸಿ.ಪಾಟೀಲ್ ಮನವಿ - coronavirus in Haveri
🎬 Watch Now: Feature Video
ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳಿಗೆ ಕೊರೊನಾ ವಕ್ಕರಿಸಿದೆ. ಇಷ್ಟು ದಿನ ಕೊರೊನಾ ಕಾಣಿಸಿಕೊಳ್ಳದ ಹಿರೇಕೆರೂರಲ್ಲಿ ಸಹ ಮಂಗಳವಾರ ಕೊರೊನಾ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಕ್ಷೇತ್ರದ ಜನ ಸೇರಿದಂತೆ ಎಲ್ಲರೂ ಸುರಕ್ಷತೆಯಿಂದ ಇರುವಂತೆ ಮನವಿ ಮಾಡಿದ್ದಾರೆ. ಜನರು ಮನೆಯಿಂದ ಹೊರಗೆ ಬರದಂತೆ ಇರುವುದು ಉತ್ತಮ. ಒಂದು ವೇಳೆ ಹೊರಗೆ ಬಂದರೂ ಸಹ ತಪ್ಪದೆ ಮಾಸ್ಕ್ ಧರಿಸಬೇಕು ಎಂದು ಜನರಲ್ಲಿ ಮನವಿ ಮಾಡಿದ್ದಾರೆ.