ಯೋಗೇಶ್ ಗೌಡ ಕೊಲೆ ಪ್ರಕರಣ: ಮತ್ತೆ ಸಿಬಿಐ ವಿಚಾರಣೆಗೆ ಹಾಜರಾದ ಬಸವರಾಜ ಮುತ್ತಗಿ - ಬಸವರಾಜ ಮುತ್ತಗಿ ಸಿಬಿಐ ವಿಚಾರಣೆ ಸುದ್ದಿ
🎬 Watch Now: Feature Video
ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ಪೊಲೀಸ್ ತನಿಖೆಯ ಪ್ರಮುಖ ಆರೋಪಿ ಬಸವರಾಜ ಮುತ್ತಗಿಯನ್ನು, ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಸಿಬಿಐ ಅಧಿಕಾರಿಗಳು ಮತ್ತೊಮ್ಮೆ ವಿಚಾರಣೆಗಾಗಿ ಕರೆಸಿಕೊಂಡಿದ್ರು. ಸುಮಾರು ಒಂದು ಗಂಟೆ ಕಾಲ ವಿಚಾರಣೆ ನಡೆಸಿದ್ರು. ಇದೀಗ ವಿಚಾರಣೆ ಮುಗಿಸಿಕೊಂಡು ಮುತ್ತಗಿ ಠಾಣೆಯಿಂದ ತೆರಳಿದ್ದಾರೆ. ಯೋಗೇಶ್ ಗೌಡ ಕೊಲೆ ಕೇಸ್ನಲ್ಲಿ ಬಸವರಾಜ ಮುತ್ತಗಿಯನ್ನು ಪೊಲೀಸರು ಮೊದಲ ಆರೋಪಿಯಾಗಿಸಿದ್ದರು. ಇದೀಗ ಮುತ್ತಗಿ ಜಾಮೀನಿನ ಮೇಲೆ ಹೊರಗಿದ್ದಾರೆ. ಇನ್ನು ಇದೇ ಪ್ರಕರಣ ಸಂಬಂಧ ನಿನ್ನೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.
Last Updated : Nov 10, 2020, 1:12 PM IST