ಎಳನೀರು, ಬಂಗಾರಪಲ್ಕೆ ಫಾಲ್ಸ್ ದುರಂತ: ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಲು ತೀರ್ಮಾನ! - belthangady Falls Disaster
🎬 Watch Now: Feature Video
ಬೆಳ್ತಂಗಡಿ: ಎಳನೀರು, ಬಂಗಾರಪಲ್ಕೆ ಜಲಪಾತದ ಬಳಿ ಯುವಕನ ಮೇಲೆ ಗುಡ್ಡ ಕುಸಿದು 9 ದಿನ ಕಳೆದರೂ ಕೂಡ ಯಾವುದೇ ಕುರುಹು ಪತ್ತೆಯಾಗದಿರುವುದು ಅತಂಕಕ್ಕೀಡು ಮಾಡಿದ್ದು, ಶೋಧಕಾರ್ಯ ಮುಂದುವರಿದಿದೆ. ಈವರೆಗೆ ಬಂಡೆಯನ್ನು ತೆರವುಗೊಳಿಸುವ ಕಾರ್ಯ ಮಾನವ ಶ್ರಮದಿಂದಲೇ ನಡೆದಿದ್ದು, ಇದೀಗ ಜೆಸಿಬಿ ಬಳಸಿ ಕಾರ್ಯಾಚರಣೆ ಮುಂದುವರಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಜೆಸಿಬಿ ತೆರಳಲು ರಸ್ತೆ ಕೂಡ ಮಾಡಿಕೊಳ್ಳಲಾಗಿದೆ. ಸಣ್ಣ ರಸ್ತೆಯಿಂದ ಜಲಪಾತದ ಸ್ಥಳಕ್ಕೆ ತೆರಳಲು ಸುಮಾರು 300 ಮೀ. ಗಳ ಸ್ಥಳದಲ್ಲಿ ಗುಡ್ಡ ಅಡ್ಡಿಯಾಗುತ್ತಿತ್ತು. ಆದರೆ ಇದೀಗ ಮಾನವ ಶಕ್ತಿ ಬಳಸಿಕೊಂಡು ಸ್ಥಳಾವಕಾಶ ಮಾಡಿಕೊಳ್ಳಲಾಗಿದೆ. ಜೊತೆಗೆ ಬಂಡೆಯನ್ನೂ ಪುಡಿ ಮಾಡಲಾಗುತ್ತಿದ್ದು, ಜೆಸಿಬಿ ಸರಾಗವಾಗಿ ಸಾಗಲು ಸಹಕಾರಿಯಾಗಿದೆ. ಯುವಕನ ಪತ್ತೆಗೆ ಸ್ಥಳೀಯರು, ಸಂಘ ಸಂಸ್ಥೆಗಳ ಸದಸ್ಯರು, ಸ್ವಯಂ-ಸೇವಕರು ಕಾರ್ಯಾಚರಣೆಗೆ ಸಹಕರಿಸಿದ್ದಾರೆ. ಮಾನವೀಯ ನೆಲೆಯಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಮಾನವ ಶಕ್ತಿಯಿಂದ ಕಾರ್ಯಾಚರಣೆ ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ಜೆಸಿಬಿ ಬಳಸಿ ಶೋಧಕಾರ್ಯ ನಡೆಸಲು ತೀರ್ಮಾನಿಸಲಾಗಿದೆ.