ಐದು ತಿಂಗಳ ಬಳಿಕ ಕೆ.ಆರ್. ಮಾರುಕಟ್ಟೆ ಪುನಾರಂಭ... ಹೇಗಿದೆ ವ್ಯಾಪಾರ! - ಬೀದಿಬದಿ ವ್ಯಾಪಾರಿಗಳು
🎬 Watch Now: Feature Video
ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಐದು ತಿಂಗಳ ಬಳಿಕ ಇಂದು ತೆರೆದಿದೆ. ಆದರೆ ವ್ಯಾಪಾರಗಳು ಪೂರ್ಣ ಪ್ರಮಾಣದಲ್ಲಿ ಇನ್ನೂ ಆರಂಭವಾಗಿಲ್ಲ. ಹೂವಿನ ಮಾರುಕಟ್ಟೆಯೂ ತೆರೆದಿಲ್ಲ. ಫುಟ್ಪಾತ್ ವ್ಯಾಪಾರಿಗಳು ಕೂಡಾ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಸೀಲ್ಡೌನ್ ಹಿನ್ನೆಲೆ ಬೇರೆ ಬೇರೆ ಜಾಗಗಳಲ್ಲಿ ವ್ಯಾಪಾರ ಮಾಡ್ತಿದ್ದ ಬೀದಿಬದಿ ವ್ಯಾಪಾರಿಗಳು ಸಿಟಿ ಮಾರುಕಟ್ಟೆಗೆ ವಾಪಸಾಗುತ್ತಿದ್ದಾರೆ. ಮಳಿಗೆಗಳ ಮಾಲೀಕರು, ಪಾಲಿಕೆ ಬಾಡಿಗೆ ಮನ್ನಾ ಮಾಡಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಕೆ.ಆರ್. ಮಾರುಕಟ್ಟೆ ಚಿತ್ರಣ ಕುರಿತು ಈಟಿವಿ ಭಾರತ ಪ್ರತಿನಿಧಿ ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ.