ಮೂರ್ನಾಲ್ಕು ರೂ.ಗೆ ಬೇಕಂತೆ ಕೆ.ಜಿ ಬಾಳೆಹಣ್ಣು, ಕೊಪ್ಪಳ ರೈತರ ಗೋಳು ಕೇಳೋರಿಲ್ಲ
🎬 Watch Now: Feature Video
ಕೊಪ್ಪಳ: ಕೊರೊನಾ ಕರಿನೆರಳು ಎಲ್ಲ ಕ್ಷೇತ್ರಗಳ ಮೇಲೂ ಆವರಿಸಿದೆ. ಬೆಳೆದಿದ್ದ ಬಾಳೆಯಿಂದ ಒಂದಿಷ್ಟು ಆದಾಯ ಬರುತ್ತದೆ ಎಂದುಕೊಂಡಿದ್ದ ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಮದ ಆ ರೈತನ ಆಸೆಗೆ ಕೊರೊನಾ ತಣ್ಣೀರೆರಚಿದೆ. ಮಾರ್ಕೆಟ್ನಲ್ಲಿ ಡಜನ್ ಬಾಳೆ ಹಣ್ಣಿಗೆ 35 ರಿಂದ 40 ರುಪಾಯಿ ಇದ್ದರೂ, ಖರೀದಿದಾರರು ರೈತರ ಬಳಿಕ ಮೂರ್ನಾಲ್ಕು ರೂಪಾಯಿಗೆ ಕೆ.ಜಿಯಂತೆ ಕೇಳ್ತಿದ್ದಾರಂತೆ. ಇದರಿಂದಾಗಿ ರೈತ ಕಂಗಾಲಾಗಿದ್ದು ಬಾಳೆ, ಗಿಡದಲ್ಲಿಯೇ ಹಣ್ಣಾಗಿ ಕೊಳೆಯುತ್ತಿವೆ. ಈ ಕುರಿತು ನಮ್ಮ ಕೊಪ್ಪಳ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ...