ಕೃಷಿ ಸಚಿವರೇ ಈ ರೈತನ ಗೋಳು ಕೇಳಿ: ಬಾಳೆಗಿಡದಲ್ಲೇ ಕೊಳೆಯುತ್ತಿದೆ ಬಂಗಾರದ ಬೆಳೆ
🎬 Watch Now: Feature Video
ಕೊರೊನಾ ವೈರಸ್ ನಿಯಂತ್ರಿಸಲು ಲಾಕ್‌ಡೌನ್ ಘೋಷಣೆಯಾದ ಬಳಿಕ ರೈತರು ಭಾರಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ಬಂಗಾರದಂಥ ಬೆಳೆ ನಷ್ಟವಾಗಿ ರೈತರು ಹತಾಶೆಗೀಡಾಗಿದ್ದಾರೆ. ಬಳ್ಳಾರಿಯ ಕಂಪ್ಲಿ ತಾಲೂಕಿನ ರಾಮಸಾಗರದ ಗ್ರಾಮದ ರೈತರೊಬ್ಬರು 5 ಎಕರೆ ಪ್ರದೇಶದಲ್ಲಿ ಬಾಳೆ ಬೆಳೆದಿದ್ದಾರೆ. ಒಳ್ಳೆಯ ಫಸಲು ಕೂಡಾ ಬಂದಿದೆ. ಆದ್ರೆ, ಬಾಳೆ ಗಿಡದಲ್ಲೇ ಹಣ್ಣಾಗಿ ಕೊಳೆಯುವ ಹಂತ ತಲುಪಿದೆ. ಲಾಕ್‌ಡೌನ್ ಪರಿಣಾಮ ಮಾರಾಟವಾಗದೆ, ಬೆವರು ಸುರಿಸಿ ಮಕ್ಕಳಂತೆ ಸಾಕಿದ ಬೆಳೆಯೆಲ್ಲಾ ಕಣ್ಣೆದುರೇ ಹಾಳಾಗುತ್ತಿದೆ. ಉಮ್ಮಳಿಸಿ ಬರುತ್ತಿರುವ ಕಣ್ಣೀರನ್ನು ತಡೆದು ಇಲ್ಲೊಬ್ಬ ರೈತ ತನ್ನ ಸಂಕಟ ಹೇಳಿಕೊಂಡಿದ್ದಾನೆ ನೋಡಿ.
Last Updated : Apr 6, 2020, 1:05 PM IST