ದುರ್ಗಾದೇವಿ ಕೆರೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಬಾಗಿನ; ಕೊರೊನಾ ಮುಕ್ತ ಸಮಾಜಕ್ಕೆ ಪ್ರಾರ್ಥನೆ...! - Durgadevi lake filling
🎬 Watch Now: Feature Video
ಹಾವೇರಿ ಜಿಲ್ಲೆ ಹಿರೇಕೆರೂರಿನ ಐತಿಹಾಸಿಕ ದುರ್ಗಾದೇವಿ ಕೆರೆಗೆ ಇಂದು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಶ್ರೀ ಯು.ಬಿ. ಬಣಕಾರ್ ಅವರ ಜೊತೆಗೂಡಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಬಾಗಿನ ಅರ್ಪಿಸಿದರು. ಇದೇ ವೇಳೆ, ಶ್ರೀ ದುರ್ಗಾ ಮಾತೆಯ ದರ್ಶನ ಪಡೆದು, ನಾಡಿನ ಜನತೆಗೆ ಒಳಿತಾಗಲಿ, ಕೊರೊನಾ ಎಂಬ ಮಾಹಾಮಾರಿ ತೊಲಗಿ ಜನರು ನೆಮ್ಮದಿಯಿಂದ ಬಾಳುವಂತಾಗಲಿ ಎಂದು ಪ್ರಾರ್ಥಿಸಿದರು.